ಏಕಂ ವಿಶ್ವಶಾಂತಿ ಉತ್ಸವಕ್ಕೆ ಸುಸ್ವಾಗತ

ಸೆಪ್ಟೆಂಬರ್ 12 ರಿಂದ ಸೆಪ್ಟೆಂಬರ್ 22, 2019

ಏಕಂ ವಿಶ್ವಶಾಂತಿ ಉತ್ಸವವು ಒಂದು ಸಾಮಾಜಿಕ ಕ್ರಿಯಾವಾದವಲ್ಲ , ಇದೊಂದು ಶಾಂತಿಯ ಕಡೆಗೆ ಮಾಡುವ ಚೈತನ್ಯದಲ್ಲಿನ ಪ್ರಯಾಣ.

ಏಕಂ ವಿಶ್ವಶಾಂತಿ ಉತ್ಸವವು ಹಿಂಸೆಯ ವಿರುದ್ಧದ ಯುದ್ಧವಲ್ಲ ; ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಅಂತರಂಗದಲ್ಲಿರುವ ಘರ್ಷಣೆ ಹಾಗು ವಿಭಜನೆಗಳಿಂದ ಬಿಡುಗಡೆಗೊಂಡು ಶಾಂತಿಯೆಡೆಗೆ ನಡೆಸುವ ಪ್ರಯಾಣವಾಗಿರುತ್ತದೆ.

ಏಕಂ ವಿಶ್ವಶಾಂತಿ ಉತ್ಸವವು ಮತ್ತೊಬ್ಬರನ್ನು ಬದಲಾಯಿಸುವ ಅಥವಾ ಸಮಾಜವನ್ನು ಬದಲಾಯಿಸುವುದರ ಬಗ್ಗೆ ಅಲ್ಲ , ಇದೊಂದು ವ್ಯಕ್ತಿಗತ ಪರಿವರ್ತನೆಯ ಪ್ರಯಾಣ. ಶಾಂತಿಯಿಂದ ತುಂಬಿದ ವ್ಯಕ್ತಿಯು ತನ್ನ ಕುಟುಂಬಕ್ಕೆ ಒಂದು ವರ ಹಾಗು ಪ್ರಪಂಚದ ಒಳಿತಿಗಾಗಿ ಒಂದು ಪ್ರಚಂಡಶಕ್ತಿಯಿದ್ದಂತೆ.

ಇದರ ಧ್ಯೇಯ
ವಿಡಿಯೋ ವೀಕ್ಷಿಸಿ
ವಿಶ್ವಶಾಂತಿಗಾಗಿ ನಿಮ್ಮ ಕೊಡುಗೆ

ನೀವು ಶಾಂತಿಯ ಚೈತನ್ಯಕ್ಕೆ ಜಾಗೃತವಾದಾಗ, ನೀವು ನಿಮ್ಮ ನಿಕಟ ಬಾಂಧವ್ಯಗಳಲ್ಲಿ ಉಪಶಮನ ಮಾಡುವ ಶಕ್ತಿಯನ್ನು ಪಡೆಯುತ್ತೀರಿ. ನೀವು ಪ್ರೀತಿಯಿಂದ ತುಂಬಿದ ತಂದೆ-ತಾಯಿಗಳು, ಜೀವನ ಸಂಗಾತಿ ಹಾಗು ಮಕ್ಕಳಾಗುವಿರಿ. ನಿಮ್ಮ ಹತ್ತಿರದ ಬಾಂಧವ್ಯಗಳಲ್ಲಿ ಈ ಎಲ್ಲಾ ಅಂಶಗಳಿಗೆ ನೀವು ಜಾಗೃತವಾಗುವಿರಿ.

ನೀವೊಬ್ಬ ಶಾಂತಿಯ ನಾಯಕ, ಶಾಂತಿಯುತ ವ್ಯಾಪಾರಿ ಅಥವಾ ಶಾಂತಿಯುತ ಸಮಾಜ ಸೇವಕನಾಗಿ, ಸಹೋದ್ಯೋಗಿಗಳು ಹಾಗು ನಿಮ್ಮ ಜೊತೆ ಕೆಲಸ ಮಾಡುವ ಎಲ್ಲರ ಹೃದಯದಲ್ಲಿ ಸಹಕಾರ ಹಾಗು ಸಾಮರಸ್ಯ ಕೂಡಿದ ಪದ್ಧತಿಯನ್ನು ಪೋಷಿಸುವಿರಿ.

ಸಮಾಜ ಹಾಗು ಸಮೂಹವನ್ನು ಮುನ್ನಡೆಸುವ ಜವಾಬ್ದಾರಿಯ ಜೊತೆಗೆ ನಿಮ್ಮ ಪರಿಧಿಯೊಳಗೆ ಬರುವ ಎಲ್ಲರ ಹೃದಯದಲ್ಲಿ ಶಾಂತಿ ಹಾಗು ಪರಿವರ್ತನೆಯನ್ನು ತರಬಲ್ಲ ಉತ್ತಮ ನಾಗರೀಕನಾಗಿ ಹೊರಹೊಮ್ಮುತ್ತೀರ. ಅಂತಿಮವಾಗಿ, ತಪನೆಯುಳ್ಳ ಶಾಂತಿದೂತರಾದ ನೀವು ವಿಶ್ವಚೈತನ್ಯವನ್ನು ಪ್ರಭಾವಿಸಿ ಭೂಮಿಯನ್ನು ಸುಂದರವಾಗಿಸಲು ಯೋಗದಾನವನ್ನು ಮಾಡುವಿರಿ.

ವಿಶ್ವಶಾಂತಿಯ ಮೇಲೆ ಏಕಂನ ಪ್ರಭಾವ

ಏಕಂ ಒಂದು ಯೋಗಿಕ ಶಕ್ತಿಕೇಂದ್ರ. ಇದನ್ನು ಸನಾತನ ವಾಸ್ತುತತ್ವಗಳು ಹಾಗು ರೇಖಾಗಣಿತದ ಸೂತ್ರಗಳನ್ನಾಧಾರಿಸಿ ವಿಶೇಷವಾಗಿ ನಿರ್ಮಿಸಲಾಗಿದೆ. ಇದರ ನಿರ್ಮಾಣದ ಉದ್ದೇಶವೇ ಸಮಸ್ತ ಮಾನವ ಜಾತಿಗೆ ಉನ್ನತವಾದ ಮುಕ್ತಿಯ ಚೈತನ್ಯದ ಸ್ಥಿತಿಗಳ ಅನುಭವ ನೀಡಲು ಹಾಗು ವಿಶ್ವ ಪರಿವರ್ತನೆಯನ್ನು ತರುವುದು. ಇದೊಂದು ಶಕ್ತಿಯುತ ಕ್ಷೇತ್ರ, ಇಲ್ಲಿ ಪ್ರವೇಶಿಸುವ ಪ್ರತೀ ವ್ಯಕ್ತಿಯು ವಿಶ್ವಚೈತನ್ಯ ಅಥವಾ ವಿಶ್ವಪ್ರಜ್ಞೆಯೊಂದಿಗೆ ಸುಲಭವಾಗಿ ತಾದಾತ್ಮ್ಯತೆ ಅಥವಾ ಕನೆಕ್ಟ್ ಆಗುತ್ತಾರೆ.

ಇಲ್ಲಿ ಧ್ಯಾನವು ಸಿದ್ಧಿಸುತ್ತದೆ, ಅಲೌಕಿಕ ಅನುಭವಗಳು ಸಿದ್ಧಿಸುತ್ತವೆ, ಇಲ್ಲಿ ಮುಕ್ತಿಯ ಸ್ಥಿತಿಗಳು ಸಿದ್ಧಿಸುತ್ತದೆ.

ಹೆಚ್ಚಿನ ಜನರು ಏಕಂನ ಗರ್ಭಗುಡಿಯಲ್ಲಿ ಕುಳಿತು ಧ್ಯಾನಿಸಿದಾಗ, ಅವರ ಚೈತನ್ಯದಲ್ಲಿ ನಡೆಯುವ ಪರಿವರ್ತನೆಯು ವೃದ್ಧಿಯಾಗಿ ಅದು ಸಮಸ್ತ ಮಾನವ ಚೈತನ್ಯದ ಮೇಲೆ ಪ್ರಭಾವ ಬೀರುತ್ತದೆ, ಇದರ ಪರಿಣಾಮವಾಗಿ ವಿವಿಧ ಪೀಸ್ ಎನರ್ಜಿ ಪಾಯಿಂಟ್ ನಲ್ಲಿ ಸೇರಿರುವ ಜನರು ಏಕಂ ಜೊತೆಗೆ ಕನೆಕ್ಟ್ ಆಗಿ ತಮ್ಮ ಚೈತನ್ಯದಲ್ಲಿ ಮಹತ್ತರವಾದ ಬದಲಾವಣೆಯನ್ನು ಹೊಂದುವರು. ಇದರ ಮೂಲಕ ಪ್ರೀತಾಜೀ ಮತ್ತು ಕೃಷ್ಣಾಜೀಯವರ ವಿಶ್ವಶಾಂತಿ ಧ್ಯೇಯವು ನೇರವೇರುವುದು/ಫಲಿಸುತ್ತದೆ. ಇದರಿಂದ, ವಿಶ್ವದಲ್ಲಿನ ಜೀವಿಗಳಲ್ಲಿ ಉನ್ನತವಾದ ಕರುಣೆ, ಮಹತ್ತರವಾದ ಸಾಮರಸ್ಯ ಹಾಗು ಮಹತ್ತರವಾದ ಕ್ರಮ ಉದಯಿಸುತ್ತದೆ.

ಏಕಂ ವಿಶ್ವಶಾಂತಿ ಉತ್ಸವದ ಸಮಯದಲ್ಲಿ ಏನು ನಡೆಯುತ್ತದೆ?

ಸೆಪ್ಟೆಂಬರ್ 12 ರಿಂದ 22 ಸೆಪ್ಟೆಂಬರ್, 2019

ವ್ಯಕ್ತಿಗತ ಚೈತನ್ಯ ಮತ್ತು ವಿಶ್ವಚೈತನ್ಯ ಬೇರೆ ಬೇರೆ ಅಲ್ಲ. ವಿಶ್ವದಲ್ಲಿ ನಡೆಯುವ ಬದಲಾವಣೆಯು ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಹಾಗೆಯೇ, ವ್ಯಕ್ತಿಯಲ್ಲಿ ಬರುವ ಬದಲಾವಣೆಗಳು ಈ ವಿಶ್ವವನ್ನು ಪ್ರಭಾವಿಸುತ್ತದೆ. ಚೈತನ್ಯದ ಸ್ಥರದಲ್ಲಿ ವ್ಯಕ್ತಿ ಹಾಗು ವಿಶ್ವವು ಬೇರೆ ಬೇರೆ ಅಲ್ಲ.

ಏಕಂ ವಿಶ್ವಶಾಂತಿ ಉತ್ಸವದ ಸಮಯದಲ್ಲಿ , ಏಕಂ ಪುಣ್ಯಕ್ಷೇತ್ರವು ಅಪಾರ ಅನುಗ್ರಹವನ್ನು ಹೊರಹೊಮ್ಮುತ್ತಿದ್ದು, ಅಲ್ಲಿ ಹೆಜ್ಜೆ ಇಡುವ ಪ್ರತಿಯೊಬ್ಬರನ್ನು ಆಶೀರ್ವದಿಸುತ್ತದೆ. ಅಷ್ಟೇ ಅಲ್ಲದೆ, ವಿಶ್ವಶಾಂತಿಗಾಗಿ ಅವಶ್ಯವಿರುವ ಕಾಸ್ಮಿಕ್ ಶಕ್ತಿಗಳನ್ನು ಸಹ ಏಕಂ ಉತ್ಪತ್ತಿ ಮಾಡುತ್ತದೆ.

ಏಕಂ ವಿಶ್ವಶಾಂತಿ ಉತ್ಸವದ ಸಮಯದಲ್ಲಿ, ಪ್ರತಿದಿನ ನಡೆಯುವ ಸಿದ್ಧಿಗಳು ಮತ್ತು ಉಪಾಸನೆಗಳ ಜೊತೆಗೆ ವಿಶೇಷ ರೀತಿಯ ದೀಕ್ಷೆಗಳು ಮತ್ತು ಪ್ರಕ್ರಿಯೆಗಳಾದ ದಶಶಾಂತಿ ಸಿದ್ಧಿಗಳನ್ನು ಸಹ ನಡೆಸಲಾಗುತ್ತದೆ.

ದಶಶಾಂತಿ ಸಿದ್ಧಿಗಳೆಂದರೆ, ಏಕಂನಲ್ಲಿ ಪ್ರತಿದಿನವು ನಿರ್ದಿಷ್ಟವಾದ ಸಂಕಲ್ಪದಿಂದ ನಡೆಸಲಾಗುವ ವಿಶೇಷ ಪ್ರಕ್ರಿಯೆಗಳು ಎಂದರ್ಥ. ಇವು ವಿಶ್ವದಲ್ಲಿನ ವಿವಿಧ ಆಯಾಮಗಳಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸಹಾಯ ಮಾಡುತ್ತದೆ. ಈ ಸಂಕಲ್ಪಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ವಿಶೇಷ ಆಶೀರ್ವಾದಗಳನ್ನು ಪ್ರತಿದಿನ ಪಡೆಯುವರು.

ದಶಶಾಂತಿ ಸಿದ್ಧಿಗಳು

ಸೆಪ್ಟೆಂಬರ್ 12
ಶಾಂತಿ ಧ್ಯಾನ : ಪ್ರಪಂಚದಲ್ಲಿ ನಡೆಯುತ್ತಿರುವ ಯುದ್ಧಗಳು ಅಂತ್ಯವಾಗಲು.
ನೀವು ಪಡೆಯುವ ಆಶೀರ್ವಾದದಿಂದ ನಿಮ್ಮ ಚೈತನ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಘರ್ಷಣೆಗಳು ಕಡಿಮೆಯಾಗಲು ಸಹಾಯವಾಗುತ್ತದೆ.
ಸೆಪ್ಟೆಂಬರ್ 13
ಶಾಂತಿಧ್ಯಾನ: ಪ್ರಕೃತಿಯ ವಿರುದ್ಧ ನಡೆಯುತ್ತಿರುವ ಹಿಂಸೆಗಳು ನಿಲ್ಲಲು.
ನಿಮ್ಮ ಮನೆಗಳಲ್ಲಿ ವಿಶೇಷವಾದ ಪಾಸಿಟಿವ್ ಶಕ್ತಿಗಳ ಪ್ರವೇಶವಾಗುವುದು.
ಸೆಪ್ಟೆಂಬರ್ 14
ಶಾಂತಿಧ್ಯಾನ: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಲು.
ನಿಮ್ಮ ಕುಟುಂಬದಲ್ಲಿರುವ ಹೆಣ್ಣುಮಕ್ಕಳು ಶಾಂತಿ ತುಂಬಿದ ಜೀವನ ನಡೆಸಲು ಆಶೀರ್ವಾದವನ್ನು ಪಡೆಯುವಿರಿ.
ಸೆಪ್ಟೆಂಬರ್ 15
ಶಾಂತಿಧ್ಯಾನ: ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಲು.
ನಿಮ್ಮ ಮಕ್ಕಳು ಹಾಗು ನಿಮ್ಮ ಮುಂದಿನ ಪೀಳಿಗೆಗಳು ಶಾಂತಿಯಿಂದ ಬಾಳಲು ಆಶೀರ್ವಾದವನ್ನು ಪಡೆಯುವಿರಿ.
ಸೆಪ್ಟೆಂಬರ್ 16
ಶಾಂತಿಧ್ಯಾನ: ಜಗತ್ತಿನಲ್ಲಿರುವ ಧಾರ್ಮಿಕ ಅಸಹಿಷ್ಣುತೆ ಅಂತ್ಯಗೊಳ್ಳಲು.
ಭಗವಂತನ ಜೊತೆಗೆ ದೃಢವಾದ ಬಾಂಧವ್ಯಕ್ಕಾಗಿ ಆಶೀರ್ವಾದ ಪಡೆಯುವಿರಿ.
ಸೆಪ್ಟೆಂಬರ್ 17
ಶಾಂತಿಧ್ಯಾನ: ಜನಾಂಗೀಯ ತಾರತಮ್ಯ ಅಂತ್ಯಗೊಳ್ಳಲು.
ನೀವು ಸಮಾಜದಲ್ಲಿ ಹೆಚ್ಚಿನ ಗೌರವ ಹಾಗು ಅಂಗೀಕಾರದೊಂದಿಗೆ ಬಾಳುವ ಆಶೀರ್ವಾದವನ್ನು ಪಡೆಯುವಿರಿ.
ಸೆಪ್ಟೆಂಬರ್ 18
ಶಾಂತಿಧ್ಯಾನ: ಪ್ರಾಣಿಗಳ ವಿರುದ್ಧ ನಡೆಯುತ್ತಿರುವ ಕ್ರೂರತೆ ನಿಲ್ಲಲು.
ನಿಮ್ಮಲ್ಲಿ ಅಪಾರವಾದ ಕರುಣೆ ಜಾಗೃತವಾಗಲು ಆಶೀರ್ವಾದವನ್ನು ಪಡೆಯುವಿರಿ.
ಸೆಪ್ಟೆಂಬರ್ 19
ಶಾಂತಿಧ್ಯಾನ: ಎಲ್ಲರ ಮನೆಗಳಲ್ಲಿ ನಡೆಯುತ್ತಿರುವ ಹಿಂಸೆ ಅಂತ್ಯಗೊಳ್ಳಲು.
ನಿಮ್ಮ ಕುಟುಂಬದಲ್ಲಿ ಅಪಾರವಾದ ಶಾಂತಿ ನೆಲೆಸಲು ಆಶೀರ್ವಾದವನ್ನು ಪಡೆಯುವಿರಿ.
ಸೆಪ್ಟೆಂಬರ್ 20
ಶಾಂತಿಧ್ಯಾನ: ಯುವಜನರ ಮನಸ್ಸಿನಲ್ಲಿರುವ ಹಿಂಸೆ ಅಂತ್ಯವಾಗಲು.
ನಿಮ್ಮ ಜೀವನದಲ್ಲಿರುವ ಯುವಜನರು ಏಳಿಗೆ ಹಾಗು ಶಾಂತಿಯನ್ನು ಹೊಂದಲು ಆಶೀರ್ವಾದವನ್ನು ಪಡೆಯುವಿರಿ.
ಸೆಪ್ಟೆಂಬರ್ 21
ಶಾಂತಿಧ್ಯಾನ: ಆರ್ಥಿಕ ಶೋಷಣೆ ನಿಲ್ಲಲು.
ನಿಮ್ಮ ಜೀವನದಲ್ಲಿ ಹೆಚ್ಚಿನ ಸಿರಿ-ಸಂಪತ್ತನ್ನು ಪಡೆಯಲು ಆಶೀರ್ವಾದವನ್ನು ಪಡೆಯುವಿರಿ.
ಸೆಪ್ಟೆಂಬರ್ 22
ಶಾಂತಿಧ್ಯಾನ: ಈ ದಿನ ಬಹಳ ವಿಶೇಷವಾದ ದಿನವಾಗಿರುತ್ತದೆ. ಈ ದಿನದ ಧ್ಯಾನವು ವಿಶೇಷ ರೀತಿಯಲ್ಲಿ ವಿಶ್ವಶಾಂತಿಗಾಗಿ ಮತ್ತು ಸಮಸ್ತ ಮಾನವ ಜಾತಿಯು ಶಾಂತಿತುಂಬಿದ ಭವಿಷ್ಯವನ್ನು ಅನುಭವಿಸಲು ಆಗಿರುತ್ತೆದೆ.
ಈ ದಿನ ನೀವು ಪಡೆಯುವ ಆಶೀರ್ವಾದ: ಜೀವನ್ಮುಕ್ತಿ ಸ್ಥಿತಿಯನ್ನು ಪಡೆಯುವ ದಿಶೆಯಲ್ಲಿ ನಿಮ್ಮ ಆಧ್ಯಾತ್ಮಿಕ ಬೆಳವಣಿಗೆಯು ಶೀಘ್ರವಾಗಿ ನಡೆಯಲು ಆಗಿರುತ್ತದೆ.

ನೀವೆಲ್ಲರೂ ಶಕ್ತಿಯುತವಾದ ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಾಗು ವಿಶ್ವಶಾಂತಿಗೆ ಕೊಡುಗೆದಾರರಾಗಬೇಕೆಂದು ಸ್ವಾಗತಿಸುತ್ತೇವೆ.

 

ವೇಳಾಪಟ್ಟಿ :

ಪ್ರಪಂಚದಾದ್ಯಂತ ಇರುವ ಪೀಸ್ ಮೇಕರ್ಸ್ ಆನ್ಲೈನ್ನಲ್ಲಿ ಸಂಜೆ 6.30ರಿಂದ 7.30 ವರೆಗೆ ಸೇರುತ್ತಾರೆ.

ಪ್ರತಿದಿನ ನೀವು ಇದೇ ಸಮಯದಲ್ಲಿ ನಮ್ಮ ಜೊತೆ ಕನೆಕ್ಟ್ ಆಗಬೇಕು. ಕೊನೆಯ ದಿನ ನೀವೆಲ್ಲರೂ ನಮ್ಮ ಜೊತೆ ಸಂಭ್ರಮಾಚರಣೆಯಲ್ಲಿ ಸಹ ಭಾಗವಹಿಸಬಹುದು.

ಕ್ಯಾಂಪಸ್ ನಲ್ಲಿರುವ ಪೀಸ್ ಮೇಕರ್ಸ್ ನಿಮ್ಮ ದಿನಚರಿಯೂ ಬೆಳಿಗ್ಗೆ ಪ್ರಾರಂಭವಾಗಿ ಏಕಂ ಗರ್ಭಗುಡಿಯಲ್ಲಿ ನಡೆಯುವ ಶಾಂತಿ ಧ್ಯಾನದೊಂದಿಗೆ ಮುಕ್ತಾಯವಾಗುತ್ತದೆ.

ನಮ್ಮ ಸಮುದಾಯದ ಬಗ್ಗೆ ತಿಳಿಯಿರಿ

ಏಕಂ ವರ್ಲ್ಡ್ ಪೀಸ್ ಮೇಕರ್ ಎನ್ನುವುದು, ಇಡೀ ವಿಶ್ವದಲ್ಲಿ ಶಾಂತಿ ನೆಲೆಸಬೇಕೆಂಬ ಪವಿತ್ರವಾದ ಧ್ಯೇಯ ಹೊಂದಿರುವ ವ್ಯಕ್ತಿಗಳ ಸಮೂಹ. ಪರಿವರ್ತನೆ ಹೊಂದಿದ ಹೊಸದಾದ ಚೈತನ್ಯದೊಂದಿಗೆ ಜೀವಿಸುತ್ತಿರುವ ವ್ಯಕ್ತಿ ಮಾತ್ರವೇ ಮತ್ತೊಬ್ಬ ವ್ಯಕ್ತಿಗೆ ಸ್ಪಂದಿಸಬಲ್ಲ ಹಾಗೂ ಎಲ್ಲರ ಯೋಗಕ್ಷೇಮಕ್ಕಾಗಿ ಕೊಡುಗೆಯನ್ನು ನೀಡಬಲ್ಲ.

ಏಕಂ ವಿಶ್ವ ಶಾಂತಿ ಉತ್ಸವವು ನಿಮಗೆ ‘ಪೀಸ್ ಮೇಕರ್’ ಆಗಿ, ನಿಮ್ಮ ಸುತ್ತ ಬದುಕುತ್ತಿರುವ ಜನರ ಜೀವನದ ಮೇಲೆ ಪ್ರಭಾವವನ್ನು ಬೀರಿ,ವಿಶ್ವ ಚೈತನ್ಯದಲ್ಲಿ ಪರಿವರ್ತನೆಯನ್ನು ತರುವ ಸುವರ್ಣಾವಕಾಶವನ್ನು ಒದಗಿಸುತ್ತಿದೆ.ಇದರ ಮೂಲಕ ಪ್ರತಿಯೊಬ್ಬ ಪೀಸ್ ಮೇಕರ್ ಕನಿಷ್ಠ 23 ಜನರು ಒಟ್ಟಾಗಿ ಸೇರಿ ವಿಶ್ವ ಶಾಂತಿಗಾಗಿ ಧ್ಯಾನ ಮಾಡಬಲ್ಲ ಪೀಸ್ ಎನರ್ಜಿ ಪಾಯಿಂಟ್ ಗಳನ್ನು ಸೃಷ್ಟಿ ಮಾಡುವ ಅವಕಾಶವಿದೆ.

0
ಏಕಂ ವರ್ಲ್ಡ್ ಪೀಸ್ ಮೇಕರ್ಸ್
0
ಏಕಂ ಪೀಸ್ ಎನರ್ಜಿ ಪಾಯಿಂಟ್ಸ್
0
ಏಕಂ ಕ್ಷೇತ್ರಕ್ಕೆ ಬನ್ನಿ

ನೀವು ಸಹ ಪೀಸ್ ಮೇಕರ್ ಆಗಿರಿ !

ಈ ಸುವರ್ಣ ಅವಕಾಶವನ್ನು ಉಪಯೋಗಿಸಿ ನೊಂದಣಿ ಮಾಡಿಕೊಳ್ಳಿ.